ಹುಮ್ಮದ ಪಂಜುರ್ಲಿ ಮೂಲತಃ ಹುಮ್ಮದ ಜನನಂದ ಬೀಡಿನ ಬಳ್ಳಾಲ ಜಾನು ಪೆರ್ಗಡೆಯವರ ಮನೆ ದೈವ. ಕಾರ್ಕಳದ ಬೈಲಸೂಡ ಅರಸರು ಯುದ್ದದ ಸಂದರ್ಭದಲ್ಲಿ ಜಾನು ಪೆರ್ಗಡೆಯಲ್ಲಿ ಸಹಾಯ ಯಾಚಿಸಿದಾಗ ಅವರು ಸಮರಕಲೆಯಲ್ಲಿ ನಿಷ್ಣಾತನಾಗಿದ್ದ ಮಾಂಜ ಬರ್ಕೆಯ ಅನಂತ ಬೈದ್ಯನನ್ನು ಕರೆಸಿ ಕಳಿಸಿಕೊಡುತ್ತಾರೆ. ಜೊತೆಯಲ್ಲಿ ಆತನ ಸಹಾಯಕ್ಕೆಂದು ತನ್ನ ಮನೆದೈವ ಪಂಜುರ್ಲಿಯನ್ನು ಆತನಿಗೆ ಕೈಯೇರಿ ಕೊಡುತ್ತಾರೆ. ಪಂಜುರ್ಲಿಯ ಸಹಾಯದಿಂದ ಯುದ್ದವನ್ನು ಗೆದ್ದ ಅನಂತ ಬೈದ್ಯ ಮುಂದೆ ತನ್ನ ಮಾಂಜ ಬರ್ಕೆಯಲ್ಲಿ ಹುಮ್ಮದ ಪಂಜುರ್ಲಿ ಎಂಬ ಹೆಸರಿನಿಂದ ಆರಾಧಿಸುತ್ತಾನೆ. ಮುಂದೆ ಆತನೂ ದೈವತ್ವಕ್ಕೇರಿ ಮಾಂಜದ ಬರ್ಕೆಯಲ್ಲಿ ಅನಂತ ಬೈದ್ಯ ಎಂಬ ಹೆಸರಿಂದ ದೈವವಾಗಿ ಆರಾಧಿಸಲ್ಪಡುತ್ತಾನೆ. ಇಂದಿಗೂ ಮಾಂಜ ಬರ್ಕೆಯಲ್ಲಿ ಹುಮ್ಮದ ಪಂಜುರ್ಲಿ ನೇಮದ ಮಧ್ಯದಲ್ಲಿ ಅನಂತ ಬೈದ್ಯನಿಗೂ ನೇಮ ನಡೆಯುತ್ತದೆ.
Hummada Panjurli Nema
Manja Barke, Tellar
Karkal- Udupi District
#hummada_panjurli #bhootakola
Hummada Panjurli Yenne Boolya -
Hummada Panjurli-Anantha Baidya Nema